MP ಕವನ ಸಂಗ್ರಹ : ‘ಲೀಲಾ ನಮನ ‘ – ಕವಿಯಿತ್ರಿ . ಆಶಾಲತ

35
Share

ಲೀಲಾ ನಮನ

ಮಾತೃ ಸ್ವರೂಪಿಣಿ ಲೀಲಮ್ಮ
ನಿಮ್ಮನು ಮರೆಯುವುದು ಹೇಗಮ್ಮ
ಬಾಲ್ಯದಲ್ಲಿ ನಾ ಕಂಡ ಆ ಸುಂದರ ವದನ ಎನ್ನ ಮನದಂಗಳದಿ ಅಚ್ಚಳಿಯದೆ ಉಳಿದಿದೆಯಮ್ಮ
ಕನ್ನಡ ಚಿತ್ರ ಜಗದ ಬಾಂದಳದಿ
ಸದಾ ಮಿನುಗುವ ಧ್ರುವತಾರೆ ನೀವಮ್ಮ
ಮತ್ತೆ ಹುಟ್ಟಿ ಬನ್ನಿ ಓ ಲೀಲಮ್ಮ ||1||
ಹುಟ್ಟಿದ ಆರು ವರುಷಗಳಲ್ಲೇ ಮಾತ ಪಿತರನ್ನು ಕಳೆದು ಕೊಂಡ
ನತದೃಷ್ಟ ಕಂದ ನೀವಮ್ಮ
ವೈಯಕ್ತಿಕ ಜೀವನದಲ್ಲಿ ನೋವಿನ ಕಹಿಯನ್ನು ಉಂಡರೂ
ಚಿತ್ರ ರಂಗದಲ್ಲಿ ನಲಿವಿನ ರಸಾದೌತಣ ನೀಡಿದ ಮಹಾನ್ ಕಲಾವಿದೆ ನೀವಮ್ಮ
ಮತ್ತೆ ಹುಟ್ಟಿ ಬನ್ನಿ ಓ ಲೀಲಮ್ಮ
ನಿಮ್ಮನು ಮರೆಯುವುದು ಹೇಗಮ್ಮ ||2||
ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ ಕಲಾ ಸರಸ್ವತಿ ನೀ ವಮ್ಮ
ಭೂಮಿತಾಯಿಯ ಚೊಚ್ಚಿಲ ಮಕ್ಕಳ ಐಸಿರಿ ನೀವಮ್ಮ
ರಣಧೀರ ಕಂಠಿರವನ ರಾಣಿಯಾಗಿ
ರಾಣಿ ಹೊನ್ನಮ್ಮಳಾಗಿ ಮನೋಜ್ಞ ಅಭಿನಯ ನೀಡಿದ ಅದ್ಭುತ ಕಲಾವಿದೆ ನೀವಮ್ಮಾ
ಬಹುಮುಖ ಪ್ರತಿಭೆಯ ವ್ಯಕ್ತಿತ್ವ ನಿಮ್ಮದು
ನಿಮ್ಮ ನಟನೆಯ ಮಜಲುಗಳು ಹತ್ತು ಹಲವು
ಮತ್ತೇ ಹುಟ್ಟಿ ಬನ್ನಿ ಓ ಲೀಲಮ್ಮ ||3||
ಮಾತೆಯಾಗಿ, ಮಡದಿಯಾಗಿ, ಸೋದರಿಯಾಗಿ, ಗೆಳತಿಯಾಗಿ ಅರಸಿಯಾಗಿ ನಿಮ್ಮ ಪಾತ್ರಭಿನಯ ಮನೋಜ್ಞ ವಮ್ಮ
ಪಂಚ ಭಾಷಾ ತಾರೆಯಾಗಿ ಮಿನುಗಿದ ಮೇರು ಕಲಾವಿದೆ ನೀವಮ್ಮ
ನಿಮ್ಮ ಹೃದಯ ಸ್ಪರ್ಶಿ ಅಭಿನಯಕ್ಕಾಗಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಅಗ್ರ ಗಣ್ಯ ಕಲಾವಿದೆ ನೀವಮ್ಮ
ಮತ್ತೆ ಹುಟ್ಟಿ ಬನ್ನಿ ಓ ಲೀಲಮ್ಮ
ನಿಮ್ಮನು ಮರೆಯುವುದು ಹೇಗಮ್ಮ ||4||
ವೈಯಕ್ತಿಕ ಬದುಕು ಬೆಂಕಿಯ ಕುಲುಮೆಯಾದರೂ
ಬಾಹ್ಯ ಜೀವನದಲ್ಲಿ ತಂಗಾಳಿಯಂತೆ
ಬದುಕಿದ ಬೆಂಕಿಯಲ್ಲಿ ಅರಳಿದ ಕುಸುಮ ನೀವಮ್ಮ
ಕಡು ಕಷ್ಟದಲ್ಲಿ ಬದುಕು ಸವೆಸಿದರೂ ಹಲವಾರು ಸಮಾಜ ಮುಖಿ ಕಾರ್ಯ ಗಳಲ್ಲಿ ತೊಡಗಿಸಿ ಕೊಂಡಾಕೆ ನೀವಮ್ಮ
ಕನ್ನಡ ಚಿತ್ರ ಜಗತ್ತಿನಲ್ಲಿ ಅನಭಿಶಕ್ತ ನಟಿಯಾಗಿ ರಾರಾಜಿಸಿದ ಶ್ರೇಷ್ಠ ಅಭಿನೇತ್ರಿ ನೀವಮ್ಮ
ನಿಮ್ಮ ಹೆಸರು ಕೀರ್ತಿ ಕನ್ನಡ ನಾಡಿನಲ್ಲಿ ಅಮರ ಅಜರಾಮರ
ಮತ್ತೆ ಹುಟ್ಟಿ ಬನ್ನಿ ಓ ಲೀಲಮ್ಮ||5||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share