MP ಸ್ನ್ಯಾಕ್ಸ್ : ತ್ರಿವಳಿ ಸಂಗಮ 45

193
Share

ತ್ರಿವಳಿ ಸಂಗಮ : ಒಗಟು, ಗಾದೆ ಹಾಗೂ ರಸಪ್ರಶ್ನೆ – 45

ಪುರಾತನ ಕಾಲದಿಂದಲೂ ಒಗಟುಗಳು ಹಾಗೂ ಗಾದೆಗಳು ಜನಜನಿತವಾದ ಅನುಭವಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಿರಿಯರು ಹೇಳುವ ಹಾಗೆ ಗಾದೆಗಳು ಎಂದು ಸುಳ್ಳಾಗುವುದಿಲ್ಲ. ತಾತ, ಅಜ್ಜಿ, ತಂದೆ, ತಾಯಿ ಹಾಗೂ ಹಿರಿಯರು ತಮ್ಮ ಮನೆಗಳಲ್ಲಿ ಮಕ್ಕಳು ಮಾಡಿದ ತಪ್ಪನ್ನು ತಿದ್ದಲು ಗಾದೆಗಳನ್ನು ಉದಾಹರಣೆಯಾಗಿ ಕೊಟ್ಟು ಅವರಿಗೆ ಚೆನ್ನಾಗಿ ಮನವರಿಕೆಯಾಗುವಂತೆ ಮಾಡುತ್ತಿದ್ದರು.
ಎಲ್ಲರೂ ಓದಿ ಆನಂದಿಸಿ ಮುಂದೆ ಬರುವ ನಿಮ್ಮ ಮಕ್ಕಳು ಮೊಮ್ಮಕ್ಕಳಿಗೂ ತಿಳಿಸಿ.

* ಒಗಟು :
ಹುಟ್ಟುತ್ತಲೇ ಹಸಿರು
ಬೆಳೆಯುತ್ತಲೇ ಕೆಂಪು

 ಮುಪ್ಪಿನಲ್ಲಿ ಕಪ್ಪು
ಆಗಲೇ ನಿಮ್ಮೆಲ್ಲರಿಗೂ ಒಪ್ಪು
ಹಾಗಾದರೆ ಏನು ?

* ಗಾದೆ :
ಬಂದ ದಾರಿಗೆ ಸುಂಕವಿಲ್ಲ

* ರಸಪ್ರಶ್ನೆ :
ಭಾರತೀಯರ ಮುಖ್ಯ ಕಸುಬು ಯಾವುದು ?

* ಉತ್ತರ –
ಒಗಟು –
ನೇರಳೆ ಹಣ್ಣು
ರಸಪ್ರಶ್ನೆ –
ವ್ಯವಸಾಯ .

* ಸಂಗ್ರಹ
ಟಿ.ವಿ.ಪದ್ಮ ಶೇಖರ್
ಮೇಲುಕೋಟೆ


Share