ಭಾವನೆಗಳ ಬುಟ್ಟಿ : ಬಿಗ್ ಬಾಸ್ 10 : ಸೀಸನ್ 10 ಕನ್ನಡ ಬಿಗ್ ಬಾಸ್ ವಿಶೇಷ ಏನು ಗೊತ್ತೇ ?

208
Share

ಬಿಗ್ ಬಾಸ್ 10 : ಸೀಸನ್ 10 ಕನ್ನಡ ಬಿಗ್ ಬಾಸ್ ವಿಶೇಷ ಏನು ಗೊತ್ತೇ ?
ಈ ಬಾರಿಯ ಸ್ಪರ್ಧಿಗಳು ಗಂಬೀರವಾಗಿದ್ದರು. ಅಂದರೆ ಹುಡುಗ ಹುಡುಗಿಯರ ನಡುವೆ ಯಾವುದೇ ಚಲ್ಲಾಟವಿರಲಿಲ್ಲ. ತಮ್ಮ ಗೆರೆಯನ್ನು ಯಾರೂ ದಾಟಲಿಲ್ಲ. ಕಾರ್ತಿಕ್ ಸಂಗೀತ, ತನಿಶ ವರ್ತೂರ್, ನಮ್ರತ ಸ್ನೇಹಿತ್, ಇಶಾನಿ ಮೈಕೆಲ್ ಯಾರೇ ಆಗಲಿ ಅವರವರು ಎಷ್ಟೇ ಹತ್ತಿರವಾಗಿದ್ದರೂ ನೋಡುಗರಿಗೆ ಮುಜುಗರ ತರಿಸುವಂತಿರಲಿಲ್ಲ. ಉಡುಗೆ ತೊಡುಗೆಗಾಳಾಗಲಿ, ಹಾವ ಭಾವಗಳಾಗಲಿ ತುಂಬಾ ಇತಿ ಮಿತಿಯಲ್ಲಿತ್ತು. ಹಿಂದೆ ಇದ್ದವರೆಲ್ಲಾ ಸರಿಯಾಗಿ ಇರಲಿಲ್ಲ ಎಂದು ಹೇಳುವುದಿಲ್ಲ. ಆದರೆ ಈ ವಿಷಯದಲ್ಲಿ 10 ನೇ ಸೀಸನ್ ಬೆಸ್ಟ್ ಎನ್ನುವುದರಲ್ಲಿ ಎರೆಡನೇ ಮಾತಿಲ್ಲ. ಮುಂಬರುವ ಸೀಸನ್ನಿನ ಸ್ಪರ್ಧಿಗಳಿಗೂ ಉದಾಹರಣೆಯಾಗಿದ್ದರು ಎಂದು ಹೇಳಬಹುದು.
ಸೀಸನ್ 10 ರ ಎಲ್ಲಾ ಸ್ಪರ್ಧಿಗಳುಗೂ ಒಬ್ಬ ಮಹಿಳೆಯಾಗಿ, ಒಬ್ಬ ತಾಯಿಯಾಗಿ ಅಭಿನಂದನೆ ಸಲ್ಲಿಸುತ್ತೇನೆ.

– ದೇನು


Share