ಭಾವನೆಗಳ ಬುಟ್ಟಿ : ಬಿಗ್‌ ಬಾಸ್ ಯಾರಿಗೆ ಅರ್ಥವಾಗಿದೆಯೋ ಅಥವ ಅರ್ಥವೇ ಇಲ್ಲದಿರೊ ಆಟವೋ ?

207
Share

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಮುಕ್ತಾಯ ಹಂತಕ್ಕೆ ಬಂದಿದೆ. ಪ್ರತಿನಿತ್ಯ 100 ದಿನದ ಹಬ್ಬ ಎಂದು ಟ್ರೈಲರ್ ತೋರಿಸಿತ್ತು. ಆದರೆ ನೋಡಿದ ಮೇಲೆ ಗೊತ್ತಾಯಿತು ಇದು ಜಗಳದ ಹಬ್ಬ ಎಂದು.
ಅದು ಹಾಗಿರಲಿ ಬಿಗ್ ಬಾಸ್ ಎಂದರೆ ಏನು ? ಆಟ ಹೇಗೆ ಆಡಬೇಕು ಎಂದು ಬಹುತೇಕ ಜನರಿಗೆ ಅರ್ಥವೇ ಆಗಿಲ್ಲವೇನೋ ! ಅರ್ಥ ಆಗಿಲ್ಲದವರಲ್ಲಿ ನಾನೂ ಸೇರಿದ್ದೇನೆ.
ವ್ಯಕ್ತಿತ್ವ ತೋರಿಸುವುದೋ, ಜಾಣ್ಮೆ ತೋರಿಸುವುದೋ, ಶಕ್ತಿ ತೋರಿಸುವದೋ ಗೊತ್ತಿಲ್ಲ.
ಒಬ್ಬೊಬ್ಬ ಸ್ಪರ್ಧೆಯು ಒಂದೊಂದು ಕ್ಷೇತ್ರದಲ್ಲಿ ಪ್ರಬಲರಾಗೂ, ಕೆಲುವುದರಲ್ಲಿ ದುರ್ಬಲರಾಗೂ ಇದ್ದಾರೆ. ಯಾವುದಕ್ಕೆ ಹೆಚ್ಚು ಮಾನ್ಯತೆ ದೊರಕುತ್ತದೆ ಗೊತ್ತಿಲ್ಲ.
ಉದಾಹರಣೆಗೆ ನಿನ್ನೆ ಪ್ರಸಾರವಾದ ಕಂತಿನಲ್ಲಿ ವಿನಯ್ ಹಾಗೂ ಕಾರ್ತಿಕ್ ಸ್ನೇಹದ ಬಗ್ಗೆ ಇಬ್ಬರೂ ಸಾಕಷ್ಟು ಹೇಳಿಕೊಂಡರು. ಆದರೆ ಇಷ್ಟು ದಿನಗಳೂ ಇಬ್ಬರೂ ಒಮ್ಮೆಯೂ ಒಬ್ಬರ ಬಗ್ಗೆ ಒಬ್ಬರು ಒಂದೂ ಒಳ್ಳೆಯ ಮಾತನಾಡಿಲ್ಲ. ಮೇಲಾಗಿ ಇಬ್ಬರೂ ಕೆಟ್ಟದಾಗೇ ಮಾತನಾಡಿದ್ದಾರೆ. ಏನಿದರ ಅರ್ಥ. ಇಷ್ಟು ದಿನ ಮಾತಾಡಿದ್ದು ಸುಳ್ಳ ? ಅಥವ ನಿನ್ನೆ ಇಬ್ಬರೂ ಕೈ ಹಿಡಿದು ಸ್ನೇಹದ ಬಗ್ಗೆ ಹೇಳಿಕೊಂಡಿದ್ದು ಸುಳ್ಳ ?
ಜನ ಸ್ಪರ್ಧಿಗಳ ಯಾವ ನಡವಳಿಕೆಗೆ ಮತ ಚಲಾಯಿಸುತ್ತಾರೋ ನನಗಂತೂ ಅರ್ಥ ಆಗಿಲ್ಲ.
ಒಟ್ಟಿನಲ್ಲಿ ಬಿಗ ಬಾಸ್ ಎಷ್ಟು ಜನಕ್ಕೆ ಅರ್ಥವಾಗಿದೆಯೋ, ಅಥವ ಅರ್ಥವೇ ಇಲ್ಲದಿರೊ ಆಟವೋ ಗೊತ್ತಿಲ್ಲ.

Share