ಭಾವನೆಗಳ ಬುಟ್ಟಿ : ಶ್ರೀ ರಸ್ತು ಶುಭಮಸ್ತು – ನಿರ್ದೇಶಕರೇ ಭಾರತದಲ್ಲಿ ತಾಯಿಯ ಸ್ಥಾನಕ್ಕೆ ವಿಶಿಷ್ಟ ಸ್ಥಾನವಿದೆ

168
Share

ಚಂದನವನದ ಖ್ಯಾತ ನಟಿ ಸುಧರಾಣಿಯವರು ನಟಿಸಿರುವ ಧಾರವಾಹಿ ಶ್ರೀ ರಸ್ತು ಶುಭಮಸ್ತು ಕನ್ನಡ ಜೀ ವಾಹಿನಿಯಲ್ಲಿ ನಿತ್ಯ ಪ್ರಸಾರವಾಗುತ್ತಿದೆ. ಕಥೆ, ನಟನೆಯಿಂದ ಇತ್ತೀಚೆಗೆ ಹೆಚ್ಚು ಜನರನ್ನು ತನ್ನತ್ತ ಸೆಳೆಯುತ್ತಿತ್ತು.
ಆದರೆ ಈಗ ನಾಲ್ಕೈದು ದಿನದಿಂದ ಧಾರವಾಹಿಯ ಪಾತ್ರವಾದ ತುಳಸಿಯು ಮಾಧವನ ಮನೆಯಲ್ಲಿ ಐಶೋರಾಮ ಜೀವನದಲ್ಲಿ ತೊಡಗಿಸಿಕೊಂಡಿದ್ದರು, ಒಳಗೊಳಗೆ ತನ್ನ ಸ್ವಂತ ಮಗನ ಕಷ್ಟ ನೋಡಿ ಬೇಸರ ಪಡುತ್ತಿದ್ದಳು.
ಆದರೆ ಈಗ ತೋರಿಸುತ್ತಿರುವುದು ವಿಪರೀತವಾಗಿದೆ. ಒಳ್ಳೆ ವಿದ್ಯಾವಂತನಾದ ತುಳಸಿಯ ಮಗನು ಮಾಧವನ ಮನೆಗೆ ಕಾರು ಚಾಲಕನಾಗಿ ಸೇರುವುದಂತೆ. ತನ್ನ ಸ್ವಂತ ತಾಯಿಗೆ ಕಾರು ಚಾಲಕನಾಗಿ ಕೆಲಸ ಮಾಡುವುದಂತೆ. ಇದೆಲ್ಲ ನೋಡುವಂತಹದ್ದ ?
ಸ್ವಾಭಿಮಾನದಿಂದ, ಕಷ್ಟಪಟ್ಟು ಸತ್ಯವಾಗಿ ದುಡಿಯುವುದರಲ್ಲಿ ಯಾವ ತಪ್ಪು ಇಲ್ಲ ಎನ್ನುವುದನ್ನು ತೋರಿಸುವುದು ನಿರ್ದೇಶಕರ ಉದ್ದೇಶ ಆಗಿರಬಹುದು.
ಆದರೆ ನಮ್ಮ ಭಾರತದ ಸಂಸ್ಕೃತಿಯಲ್ಲಿ ತಾಯಿಯ ಬಗ್ಗೆ ಅಪಾರ ಗೌರವ ಇದೆ. ಭಾವನೆಗಳನ್ನು ಗೌರವಿಸುವ ನಾಡು ಭಾರತ. ಕುಟುಂಬ ವ್ಯವಸ್ಥೆ ನಮ್ಮ ಸಮಾಜದ ಒಂದು ಅವಿಭಾಜ್ಯ ಅಂಗ.
ಅಂತಹದ್ದರಲ್ಲಿ ತನ್ನ ಮಗನನ್ನೆ ಚಾಲಕನಾಗಿ ಕೆಲಸಮಾಡಿಸಿಕೊಳ್ಳುವಂತಹ ತಾಯಿಯನ್ನು ನೋಡುವುದೇ ಮುಜುಗರ ತರುವಂತಹದ್ದು.
ಇಷ್ಟು ದಿನ ಇಷ್ಟ ಪಟ್ಟು ನೋಡುತ್ತಿದ್ದ ಈ ಧಾರವಾಹಿಯನ್ನು ಇನ್ನು ಮುಂದೆ ನೋಡಲೇ ಬಾರದು ಎನ್ನಿಸಿಬಿಟ್ಟಿದೆ.
ಇದು ಧಾರವಾಹಿಯೇ ಅದರೂ, ಬರೀ ನಟನೆಯಾದರೂ ತಾಯಿ ಸ್ಥಾನದಲ್ಲಿರುವವರನ್ನು ಈ ರೀತಿ ನೋಡಲು ಸಾಧ್ಯವೇ ಇಲ್ಲ. ಯಾವ ತಾಯಿ ತಾನು ಎಲ್ಲ ಸುಖಗಳನ್ನು ಅನುಭವುಸುತ್ತ ತನ್ನ ಮಗ ಕಷ್ಟಪಡುವುದನ್ನು ನೋಡಲು ಸಾದ್ಯ ಹೇಳಿ ? ಮಕ್ಕಳು ತಪ್ಪು ಮಾಡಿದ್ದರೂ ಅವರು ಕಷ್ಟ ಪಡುವುದನ್ನು ನೋಡಲು ಸಾದ್ಯವಿಲ್ಲ. ಇನ್ನು ಯಾವ ತಪ್ಪೂ ಮಾಡದ ಮಗನ ಜೊತೆ ತುಳಸಿಯವರು ಹಾಗೆ ನಡೆದುಕೊಳ್ಳಲು ಹೇಗೆ ಸಾದ್ಯ ? ಇಂತಹ ಸನ್ನಿವೇಶಗಳು ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರುತ್ತದೆ.

– ದೇನು.


Share