ಶ್ರೀ ಆಂಜನೇಯ ಚರಿತ್ರೆ ಭಾಗ : 1 – ಪುಟ : 103

148
Share

ಶ್ರೀ ಆಂಜನೇಯ ಚರಿತ್ರೆ ಭಾಗ ಒಂದು : ಪುಟ 103
ಓಂ ನಮೋ ಹನುಮತೆ ನಮಃ

ರಾವಣ ಸಂಹಾರ
ಮರುದಿನ ಯುದ್ಧದಲ್ಲಿ ರಾಮ ರಾವಣರು ಒಬ್ಬರನ್ನೊಬ್ಬರು ಎದುರಿಸಿ ಘೋರವಾದ ಯುದ್ಧ ಮಾಡಿದರು. ರಾಮನು ರಾವಣಾಸುರನ ತಲೆಯನ್ನು ನೂರೊಂದು ಬಾರಿ ಕತ್ತರಿಸಿದ. ಕೊನೆಗೆ ದೇವೇಂದ್ರನ ಸಾರಥಿ ಆದ ಮಾತಲಿಯ ಸಲಹೆ ಮೇರೆಗೆ ಬ್ರಹ್ಮಾಸ್ತ್ರವನ್ನು ಉಪಯೋಗಿಸಿ ರಾವಣಾಸುರನನ್ನು ನೆಲಸಮ ಮಾಡಿದ.
ದೇವತೆಗಳೆಲ್ಲ ಸೇರಿ ರಾಮನನ್ನು ಸ್ತುತಿಸಿದರು. ನಂತರ ಅನೇಕ ಪ್ರಧಾನಘಟ್ಟಗಳು ಮಿಂಚಿನಂತೆ ನಡೆದು ಹೋದವು.
1 . ವಿಭೀಷಣ ಪಟ್ಟಾಭಿಷೇಕ
2 . ಸೀತಾದೇವಿ ಅಗ್ನಿ ಪ್ರವೇಶ
3 . ಶ್ರೀ ರಾಮನ ಪುಷ್ಪಕಯಾನ
4 . ಭರತಸಮಾಗಮ
5 . ಶ್ರೀರಾಮ ಪಟ್ಟಾಭಿಷೇಕ
ರತ್ನ ಮಾಲಿಕ ಪ್ರಧಾನ
ಈ ಎಲ್ಲಾ ಘಟನೆಗಳು ನಡೆದಾಗಲೂ ಹನುಮಂತ ಹೆಚ್ಚು ಕಡಿಮೆ ಮೌನವಾಗಿ ಇದ್ದ. ಶ್ರೀರಾಮ ಪಟ್ಟಾಭಿಷೇಕ ಸಮಯದಲ್ಲಿ ಶ್ರೀರಾಮನು ಒಂದು ವಿಶೇಷವಾದ ರತ್ನಮಾಲೆಯನ್ನು ಸೀತೆಗೆ ಕೊಟ್ಟು ಇದನ್ನು ನಿನಗಿಷ್ಟವಾದವರು ಯಾರಿಗಾದರೂ ಕೊಡು ಎಂದು ಹೇಳಿದ.
ದೇವ, ದಾನವ, ನರ, ವಾನರ, ಮಹಾವೀರರು ತುಂಬಿದ್ದ ಆ ಮಹಾಸಭೆಯನ್ನು ಸೀತಾದೇವಿ ಪರಿಶೀಲಿಸಿ ನೋಡಿ ಕೊನೆಗೆ ಆ ರತ್ನಮಾಲೆಯನ್ನು ಹನುಮಂತನಿಗೆ ಕೊಟ್ಟಳು. ರಾಮನು ಇದನ್ನು ನೋಡಿ ಸಂತುಷ್ಟನಾದನು. ಸಭೆಯಲ್ಲಿ ಹನುಮಂತ ಮಾತ್ರ ವಿನಯದಿಂದ ಸೀತಾರಾಮರ ಪಾದದ ಬಳಿ ಬಂಟನಾಗಿ ಕುಳಿತುಕೊಂಡಿದ್ದನು.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ :
ಭಾಲರ
ಬೆಂಗಳೂರು


Share