MP ಕವನ ಸಂಗ್ರಹ : ” ಆಗು ನೀ ಆಗು ” – ಕವಿಯಿತ್ರಿ ಆಶಾಲತ

55
Share

“ಆಗು ನೀ ಆಗು”

ಓ ಜಗದ ವಿಶಿಷ್ಟ, ಬುದ್ದಿವಂತ ಸೃಷ್ಟಿಯೇ
ವಿಶ್ವದ ಅತಿಮಾನುಷ ಶಕ್ತಿಯೇ
ಪ್ರಕೃತಿಯಂತೆ ನೀ ಸಹಜವಾಗಿ
ಬಾಳ್ವೆ ನಡೆಸು
ಸದಾ ಹಚ್ಚ ಹಸಿರಿನಿಂದ ಕಂಗೊಳಿಸು
ಮಾನವನಾಗಿ ಜನಿಸಿ ಮಾನವೀಯತೆಗೆ ಓಗೊಟ್ಟು ಬಾಳು ನೀನು
ಆಗು ನೀ ಆಗು ಮೊದಲು ಮಾನವನಾಗು ||1||

ಬೆಟ್ಟದಂತೆ ಕಷ್ಟಗಳು ಬಂದೆರಗಿದರು
ಶರಧಿಯಂತೆ ನೋವಿನಲೆಗಳು
ಅಪ್ಪಳಿಸಿದರು
ಅಚಲವಾಗಿ ನಿಲ್ಲು ನೀನು
ದಿಟ್ಟತನದಲ್ಲಿ ಏಕಾಗ್ರತೆಯಿಂದ ಮುನ್ನುಗ್ಗು ನೀ
ಒಮ್ಮೆ ಸೋಲನ್ನಪ್ಪಿದರು
ನಿರಾಶೆಹೊಂದದಿರು ಜೀವವೇ
ಯಾರಿರಲಿ ಎಂತಿರಲಿ ಸಾಗುತಿಹುದು ಜೀವನ ಯಾನ ||2||

ಸೋಲೇ ಗೆಲುವಿನ ಮೆಟ್ಟಿಲು
ಸ್ಥಿತ ಪ್ರಜ್ಞನಂತೆ ಬಂದದ್ದನ್ನು ಸಮ
ಚಿತ್ತದಿ ಸ್ವೀಕರಿಸು
“ಮರಳಿ ಯತ್ನವ ಮಾಡೆoಬ”ಧ್ಯೇಯ ಮಂತ್ರವ
ಜಪಿಸಿದರೆ ಸಪಲತೆಯ ಸೋಪಾನ ನಿನ್ನ ದಾಗುವುದು
ವಿಜಯ ಲಕ್ಷ್ಮಿಯು ನಿನಗೊಲಿದು ಬರುವಳು
ಯಾರಿರಲಿ ಎಂತಿರಲಿ ಸಾಗುತಿಹುದು ಜೀವನಯಾನ ||3||

ಪರರ ಏಳಿಗೆಯ ಕಂಡು ಕರುಬದಿರು
ದ್ವೇಷಸೂಯೆ, ವೈರತ್ವ, ಮತ್ಸರಗಳ
ತ್ಯೆಜಿಸು
ಅರಿಷಡ್ವರ್ಗಗಳ ಜಯಿಸು
ಪ್ರೀತಿಯ ದೂತನಾಗಿ ಪ್ರೇಮ ಸುಧೆಯ ಹರಿಸು
ಸ್ನೇಹ ಬಂಧುತ್ವ, ಬಾಂಧವ್ಯಗಳಿಗೆ
ಬೆಸುಗೆ ಯಾಗು
ಮಾನವೀಯಮೌಲ್ಯಗಳ ಸಾಕಾರ ಮೂರ್ತಿಯಾಗು
ಮಾನವೀಯತೆ ಯ ಉಳಿಸು, ಬೆಳಸು ||4||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share