MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 120

258
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 120

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

625 . ಓಂ ವಿಶ್ವನೇತ್ರೇ ನಮಃ
626 . ಓಂ ವಜ್ರಿವಜ್ರನಿವಾರಣಾಯ ನಮಃ
627 . ಓಂ ವಿಶ್ವಬಂಧನವಿಷ್ಕಂಭಾಧಾರಾಯ ನಮಃ
628 . ಓಂ ವಿಶ್ವೇಶ್ವರ ಪ್ರಭವೇ ನಮಃ
629 . ಓಂ ಶಬ್ದಬ್ರಹ್ಮಣೇ ನಮಃ

625. ಓಂ ವಿಶ್ವನೇತಾ-
ಭಾ: ವಿಶ್ವನೇತಾsಸಿ ಜಗತೋ ವಿಷ್ಣೋರ್ವಾ ನಾಯಕೋ ಯತಃ|
ಹೇ ವಿನಾಯಕ! ಜಗತ್ತಿಗಷ್ಟೇ ಅಲ್ಲದೇ ಮಹಾವಿಷ್ಣುವಿಗೂ ನಾಯಕನಾದ್ದರಿಂದ ನಿನ್ನನ್ನು ವಿಶ್ವನೇತಾ ಎನ್ನುತ್ತಾರೆ.
ಓಂ ವಿಶ್ವನೇತ್ರೇ ನಮಃ

626. ಓಂ ವಜ್ರಿವಜ್ರನಿವಾರಣಃ-
ಭಾ: ಇಂದ್ರವಜ್ರಸ್ತಂಭನೇನ ವಜ್ರಿವಜ್ರನಿವಾರಣಃ|
ಇಂದ್ರನ ವಜ್ರಾಯುಧವನ್ನು ಸ್ತಂಭನ (ಕದಲದ ಹಾಗೆ) ಮಾಡಿದ್ದರಿಂದ ವಜ್ರಿವಜ್ರನಿವಾರಣನು. (ವಜ್ರಿ- ಇಂದ್ರ)
ಓಂ ವಜ್ರಿವಜ್ರನಿವಾರಣಾಯ ನಮಃ

627. ಓಂ ವಿಶ್ವಬಂಧನ ವಿಷ್ಕಂಭಾsಧಾರಃ-
ಭಾ: ವಿಶ್ವನಿರ್ಮಾಣ ಪರ್ಯಾಪ್ತೋ ದೇಶೋ ವಿಷ್ಕಂಭ ಉಚ್ಯತೇ|
ವಿಶ್ವಬಂಧನವಿಷ್ಕಂಭಾsಧಾರಸ್ತಸ್ಯಾಪಿ ಧಾರಣಾತ್‌||
ವಿಶ್ವ ನಿರ್ಮಾಣಕ್ಕೆ ಬೇಕಾಗುವ (ಸರಿಹೋಗುವ) ಪ್ರದೇಶವನ್ನು ‘ವಿಷ್ಕಂಭ’ ಎನ್ನುತ್ತಾರೆ. ಆ ವಿಷ್ಕಂಭಕ್ಕೂ ಸಹ ಆಧಾರಭೂತನಾದ್ದರಿಂದ ವಿಶ್ವಬಂಧನ-ವಿಷ್ಕಂಭಾಧಾರನು.
ಓಂ ವಿಶ್ವಬಂಧನವಿಷ್ಕಂಭಾಧಾರಾಯ ನಮಃ

628. ಓಂ ವಿಶ್ವೇಶ್ವರಪ್ರಭುಃ-
ಭಾ: ಬ್ರಹ್ಮಾಂಡಾನಾಂ ತದೀಶಾನಾಂ ಚೇಶೋ ವಿಶ್ವೇಶ್ವರಪ್ರಭುಃ|
ವಿಶ್ವಗಳಿಗೂ (ಬ್ರಹ್ಮಾಂಡಗಳಿಗೂ) ವಿಶ್ವಾಧಿಪತಿಗಳಾದ ದೇವತೆಗಳಿಗೂ (ವಿಶ್ವೇಶ್ವರರಿಗೂ) ಪ್ರಭುವಾದ್ದರಿಂದ ವಿಶ್ವೇಶ್ವರಪ್ರಭುವು.
ಓಂ ವಿಶ್ವೇಶ್ವರ ಪ್ರಭವೇ ನಮಃ
ಶಬ್ದಬ್ರಹ್ಮ ಶಮಪ್ರಾಪ್ಯಃ ಶಂಭುಶಕ್ತಿಗಣೇಶ್ವರಃ|
ಶಾಸ್ತಾ ಶಿಖಾಗ್ರನಿಲಯಃ ಶರಣ್ಯಶ್ಶಿಖರೀಶ್ವರಃ||
629. ಓಂ ಶಬ್ದಬ್ರಹ್ಮ-
ಭಾ: ಶಬ್ದಬ್ರಹ್ಮ ಪರಾಂ ವಾಚಮತೀತೋ ನಾದರೂಪಧೃಕ್‌|
ವಾಕ್ಕುಗಳು ಪರಾ, ಪಶ್ಯಂತೀ, ಮಧ್ಯಮಾ, ವೈಖರೀ ಎಂದು ನಾಲ್ಕು ವಿಧ. ಅವುಗಳಲ್ಲಿ ಸೂಕ್ಷ್ಮಾತಿ ಸೂಕ್ಷ್ಮವಾದ ವಾಕ್ಕೆಂದರೆ ಪರಾವಾಕ್. ಗಣೇಶನು ಅದಕ್ಕಿಂತಲೂ ಅತೀತನಾಗಿ ನಾದರೂಪವನ್ನು ಧರಿಸಿ ಶಬ್ದಬ್ರಹ್ಮವಾಗಿದ್ದಾನೆ.
ಓಂ ಶಬ್ದಬ್ರಹ್ಮಣೇ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share