MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 182

251
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 182

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

981 . ಓಂ ಸಹಸ್ರಶೀರ್ಷಾಪುರುಷಾಯ ನಮಃ
982 . ಓಂ ಸಹಸ್ರಾಕ್ಷಾಯ ನಮಃ
983 . ಓಂ ಸಹಸ್ರಪದೇ ನಮಃ
984 . ಓಂ ಸಹಸ್ರನಾಮಸಂಸ್ತುತ್ಯಾಯ ನಮಃ
985 . ಓಂ ಸಹಸ್ರಾಕ್ಷಬಲಾಪಹಾಯ ನಮಃ

981. ಓಂ ಸಹಸ್ರಶೀರ್ಷಾಪುರುಷಃ-
ಭಾ: ಸಹಸ್ರಶೀರ್ಷಾ ಪುರುಷ ಇತ್ಯೇಕಂ ನಾಮತೇ ಸ್ಫುಟಮ್‌೤
ಅನಂತ ಶಿರಸ್ಸುಗಳು ಇರುವವನು ಸಹಸ್ರಶೀರ್ಷಾಪುರುಷನು. (ಈ ನಾಮದಲ್ಲಿ ಸಹಸ್ರ ಶಬ್ದವು ಅನಂತ ಸಂಖ್ಯೆಯನ್ನು ತಿಳಿಸುತ್ತದೆ ಎಂದು ವೇದಭಾಷ್ಯದಿಂದ ಅರಿತುಕೊಳ್ಳಬೇಕು. ಈ ನಾಮವು ಗಣೇಶನ ವಿರಾಡ್ರೂಪವನ್ನು ಹೇಳುತ್ತಿದೆ.)
ಓಂ ಸಹಸ್ರಶೀರ್ಷಾಪುರುಷಾಯ ನಮಃ

982. ಓಂ ಸಹಸ್ರಾಕ್ಷಃ
983. ಓಂ ಸಹಸ್ರಪಾತ್
ಭಾ: ಅನಂತ ನೇತ್ರ ಚರಣಃ ಸಹಸ್ರಾಕ್ಷ ಸ್ಸಹಸ್ರಪಾತ್
ಲೆಕ್ಕಕ್ಕೆ ಸಿಗದಷ್ಟು ಅನಂತವಾದ ನೇತ್ರಗಳು, ಪಾದಗಳು, ಇರುವವನಾದ್ದರಿಂದ ಸಹಸ್ರಾಕ್ಷನು ಹಾಗೂ ಸಹಸ್ರಪಾತ್.
ಓಂ ಸಹಸ್ರಾಕ್ಷಾಯ ನಮಃ
ಓಂ ಸಹಸ್ರಪದೇ ನಮಃ
ಸಹಸ್ರನಾಮಸಂಸ್ತುತ್ಯಃ ಸಹಸ್ರಾಕ್ಷಬಲಾಪಹಃ೤
ದಶ ಸಾಹಸ್ರ ಫಣಭೃ-ತ್ಫಣಿರಾಜಕೃತಾಸನಃ೤೤

984. ಓಂ ಸಹಸ್ರನಾಮ ಸಂಸ್ತುತ್ಯಃ-
ಭಾ: ಸಹಸ್ರನಾಮ ಸಂಸ್ತುತ್ಯಃ ಸ್ತುತ್ಯರ್ಹೋ7ಸಂಖ್ಯನಾಮಭಿಃ೤
ಯಮಾವಿಶನ್ತಿ ನಾಮಾನಿ ಸರ್ವಾಣೀತಿ ಕಿಲ ಶ್ರುತೇಃ೤೤
‘ಯಮಾವಿಶಂತಿ ನಾಮಾನಿ ಸರ್ವಾಣಿ ಅಥವಾ (ಸರ್ವೇ ವೇದಾ ಯತ್ಪದಮಾಮನಂತಿ)’- ಎಂಬ ವೇದವಾಕ್ಯದಿಂದ ಗಣೇಶನು ಅಸಂಖ್ಯಾತವಾದ ನಾಮಗಳಿಂದ ಸ್ತುತ್ಯನು ಎಂದು ತಿಳಿದು ಬರುತ್ತದೆ. ಆದ್ದರಿಂದ ಸಹಸ್ರನಾಮಸಂಸ್ತುತ್ಯನು.
ಓಂ ಸಹಸ್ರನಾಮಸಂಸ್ತುತ್ಯಾಯ ನಮಃ

985. ಓಂ ಸಹಸ್ರಾಕ್ಷಬಲಾಪಹಃ-
ಭಾ: ಪ್ರಸಿದ್ಧಂ ತತ್ಪುರಾಣೇ ಯತ್ ಸಹಸ್ರಾಕ್ಷಬಲಾಪಹಃ೤
ಸಾವಿರ ಕಣ್ಣಿನವನಾದ ಇಂದ್ರನ ಬಲವನ್ನು ಗಣೇಶನು ಆಕರ್ಷಿಸಿಬಿಟ್ಟನೆಂದು ಗಣೇಶ ಪುರಾಣವು ಹೇಳುತ್ತಿದೆ. ಹಾಗಾಗಿ ಅವನು ಸಹಸ್ರಾಕ್ಷಬಲಾಪಹನು.
ಓಂ ಸಹಸ್ರಾಕ್ಷಬಲಾಪಹಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share