MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 185

280
Share

  ಗಣೇಶ ಸಹಸ್ರನಾಮ ಭಾಷ್ಯ : ಪುಟ – 185

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

996 . ಓಂ ಸಪ್ತಕೋಟಿ ಮಹಾಮಂತ್ರ ಮಂತ್ರಿತಾ7ವಯವದ್ಯುತಯೇ ನಮಃ
997 . ಓಂ ತ್ರಯಸ್ತ್ರಿಂಶತ್ಕೋಟಿ ಸುರಶ್ರೇಣೀ ಪ್ರಣತ ಪಾದುಕಾಯ ನಮಃ೤
998 . ಓಂ ಅನಂತನಾಮ್ನೇ ನಮಃ
999 . ಓಂ ಅನಂತಶ್ರಿಯೇ ನಮಃ
1000 . ಓಂ ಅನಂತಾನಂತಸೌಖ್ಯದಾಯ ನಮಃ

996. ಸಪ್ತಕೋಟಿ ಮಹಾಮಂತ್ರ ಮಂತ್ರಿತಾ7ವಯವದ್ಯುತಿಃ-
ಭಾ: ವಿಶ್ವರೂಪಸ್ಯ ತೇ7ಂಗಾನಿ ಸರ್ವಮಂತ್ರಾಧಿ ದೇವತಾಃ೤
ಅತಃ ಸಂಜಾತ ಮಂತ್ರೈಸ್ತೈ-ರ್ದ್ಯೋತಸೇ7ವಯವೈರಪಿ೤೤
ಸಪ್ತಕೋಟಿ ಮಹಾಮಂತ್ರ ಮಂತ್ರಿತಾ7ವಯವದ್ಯುತಿಃ೤
ಹೇ ಗಣೇಶ! ಏಳುಕೋಟಿ ಮಂದಿ ಮಂತ್ರಾಧಿಷ್ಠಾನ ದೇವತೆಯರು ವಿಶ್ವರೂಪನಾದ ನಿನ್ನ ಅಂಗಗಳಾಗಿದ್ದಾರೆ. ಅವರು ಉಚ್ಚರಿಸುತ್ತಿರುವ ಮಂತ್ರಗಳಿಂದ ನಿನ್ನ ಅವಯವಗಳು ಕಾಂತಿಯಿಂದ ಬೆಳಗುತ್ತಿವೆ. ಆದ್ದರಿಂದ ನೀನು ಸಪ್ತಕೋಟಿ ಮಹಾಮಂತ್ರ ಮಂತ್ರಿತಾ7ವಯವದ್ಯುತಿಯು.
ಓಂ ಸಪ್ತಕೋಟಿ ಮಹಾಮಂತ್ರ ಮಂತ್ರಿತಾ7ವಯವದ್ಯುತಯೇ ನಮಃ

997. ಓಂ ತ್ರಯಸ್ತ್ರಿಂಶತ್ಕೋಟಿ ಸುರಶ್ರೇಣೀ ಪ್ರಣತ ಪಾದುಕಃ
ಭಾ: ಈದೃಶಾನ್ನಾಧಿಕಸ್ತ್ವತ್ತಃ ಕೋ7ಪಿ ದೇವಸ್ತತೋ ಭವಾನ್‌೤
ತ್ರಯಸ್ತ್ರಿಂಶತ್ಕೋಟಿ ಸುರಶ್ರೇಣೀ ಪ್ರಣತ ಪಾದುಕಃ೤೤
ಹೇ ಗಣೇಶ ಸಹಸ್ರನಾಮದಲ್ಲಿ ಇಲ್ಲಿಯವರೆಗೂ ಹೇಳಿಕೊಂಡ ನಿನ್ನ ತತ್ತ್ವವನ್ನು ಅರ್ಥಮಾಡಿಕೊಂಡರೆ ನಿನಗಿಂತ ಬೇರೆ ಯಾವ ದೇವನೂ ಅಧಿಕನಲ್ಲ ಎಂದು ತಿಳಿದು ಬರುತ್ತದೆ. ನೀನು ಮೂವತ್ಮೂರು ಕೋಟಿಮಂದಿ ದೇವತೆಗಳಿಂದ ನಮಸ್ಕರಿಸಲ್ಪಟ್ಟ ಪಾದುಕೆಗಳು ಉಳ್ಳವನಾಗಿದ್ದೀಯೆ.
ಓಂ ತ್ರಯಸ್ತ್ರಿಂಶತ್ಕೋಟಿ ಸುರಶ್ರೇಣೀ ಪ್ರಣತ ಪಾದುಕಾಯ ನಮಃ೤
ಅನಂತ ನಾಮಾನಂತ ಶ್ರೀರನಂತಾನಂತ ಸೌಖ್ಯದಃ೤

998. ಓಂ ಅನಂತನಾಮಾ-
ಭಾ: ಅನಂತನಾಮಾ ಸರ್ವೇ7ಪಿ ಶಬ್ದಾಸ್ತ್ವನ್ನಾಮತಾಂ ಗತಾಃ೤
ಯಾವತ್ಪ್ರತಿಷ್ಠಿತಂ ಬ್ರಹ್ಮ ತಾವತೀ ವಾಗಿತಿಶ್ರುತೇಃ೤೤
ಹೇ ಗಣೇಶ! ಪ್ರಪಂಚದ ಶಬ್ದಗಳೆಲ್ಲವು ನಿನ್ನ ನಾಮಗಳೇ ಆಗಿವೆ. ‘ಯಾವತ್ಪ್ರತಿಷ್ಠಿತಂ ಬ್ರಹ್ಮ’ ಎಂಬ ಶ್ರುತಿವಾಕ್ಯವು ಈ ವಿಷಯವನ್ನೇ ಹೇಳುತ್ತಿದೆ.
ಓಂ ಅನಂತನಾಮ್ನೇ ನಮಃ

999. ಓಂ ಅನಂತಶ್ರೀಃ-
ಭಾ: ಅನಂತ ಶ್ರೀರಸಂಖ್ಯಾಸ್ತೇ ವಿದ್ಯಾಸಂಪತ್ತಿಕೀರ್ತಯಃ೤
ಹೇ ಗಣೇಶ! ನಿನಗೆ ಸಂಬಂಧಪಟ್ಟ ವಿದ್ಯೆಗಳು, ನಿನ್ನ ಸಂಪತ್ತು, ನಿನ್ನ ಕೀರ್ತಿ, ಅನಂತವಾಗಿರುವುದರಿಂದ ನೀನು ಅನಂತಶ್ರೀಃ.
ಓಂ ಅನಂತಶ್ರಿಯೇ ನಮಃ

1000. ಓಂ ಅನಂತಾನಂತಸೌಖ್ಯದಃ-
ಭಾ: ಪ್ರಾತಿಸ್ವಿಕ ಮನಂತಾನಾ ಮಾನನ್ತ್ಯೇ ಗಣನಾ ತು ಯಾ೤
ತಾವಂತಂ ದದದಾನಂದ ಮನಂತಾನಂತಸೌಖ್ಯದಃ೤
ಅನಂತಾನಂದದಾನಂ ತು ಸ್ವಾದ್ವೈತೇ ಪರ್ಯವಸ್ಯತಿ೤೤
ಅನಂತವಾದ ಆನಂದವನ್ನು ಕೊಡುವವನಾದ್ದರಿಂದ ಅನಂತಾನಂತ ಸೌಖ್ಯದನು. ಅನಂತಾನಂದವು ಅದ್ವೈತದಲ್ಲಿ ಪರಿಸಮಾಪ್ತಿಯಾಗುತ್ತದೆ. ಗಣೇಶನು ಸಾಧಕನನ್ನು ಪರಮಾತ್ಮ ಸ್ವರೂಪನಾದ ತನ್ನಲ್ಲಿ ಐಕ್ಯಮಾಡಿಕೊಂಡು ಪುನರಾವೃತ್ತಿರಹಿತವಾದ ಮೋಕ್ಷವನ್ನು ಕೊಡುತ್ತಾನೆ.
ಓಂ ಅನಂತಾನಂತಸೌಖ್ಯದಾಯ ನಮಃ
ಇತಿ ಭಾರತ್ಯುಪಾಖ್ಯಸ್ಯ ಭಾಸ್ಕರಾಗ್ನಿಚಿತಃ ಕೃತೌ೤
ಗಣೇಶನಾಮ ಸಾಹಸ್ರ ಖದ್ಯೋತೇ ದಶಮಂ ಶತಮ್‌೤೤
ಭಾರತೀ ಎಂಬ ಉಪಾಖ್ಯವಿರುವ ಭಾಸ್ಕರಾಗ್ನಿಹೋತ್ರಿಗಳ
ಕೃತಿಯಾದ ಗಣೇಶ ನಾಮ ಸಹಸ್ರದ ಖದ್ಯೋತವೆಂಬ
ಭಾಷ್ಯದಲ್ಲಿ ಹತ್ತನೆಯ ಶತಕವು ಸಂಪೂರ್ಣವು.

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share