MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 189

241
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 189

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಗುಲ್ಮಂ ಪ್ಲೀಹಾನಮಶ್ಮಾನ ಮತಿಸಾರಂ ಮಹೋದರಮ್‌೤
ಕಾಸಂ ಶ್ವಾಸಮುದಾವರ್ತಂ ಶೂಲಶೇಫಾದಿಸಂಭವಮ್‌೤೤
ಶಿರೋರೋಗಂ ವಮಿಂ ಹಿಕ್ಕಾಂ ಗಂಡಮಾಲಾಮರೋಚಕಮ್‌೤
ವಾತಪಿತ್ತ ಕಫ ದ್ವಂದ್ವ ತ್ರಿದೋಷ ಜನಿತಜ್ವರಮ್‌೤೤
ಆಗಂತುಂ ವಿಷಮಂ ಶೀತಮುಷ್ಣಂ ಚೈಕಾಹಿಕಾದಿಕಮ್‌೤
ಇತ್ಯಾದ್ಯುಕ್ತಮನುಕ್ತಂ ವಾ ರೋಗಂ ದೋಷಾದಿಸಂಭವಮ್‌೤೤
ಸರ್ವಂ ಪ್ರಶಮಯತ್ಯಾಶು ಸ್ತೋತ್ರಸ್ಯಾಸ್ಯ ಸಕೃಜ್ಜಪಃ೤೤
ಸಕೃತ್ಪಾಠೇನ ಸಂಸಿದ್ಧಃ ಸ್ತ್ರೀಶೂದ್ರಪತಿತೈರಪಿ೤೤
ಸಹಸ್ರನಾಮ ಮಂತ್ರೋ7ಯಂ ಜಪಿತವ್ಯಃ ಶುಭಾಪ್ತಯೇ೤೤
ಭಾ: ಅಶ್ಮಾನಂ ಅಶ್ಮರೀರೋಗಮ್‌೤ ಅಶ್ಲೀಲಮಿತಿ ಪಾಠೇ ವಿಶೇಷಣಂ೤ ದ್ವಂದ್ವಾಃ
ವಾತಾದಿಷು ಯುಗ್ಮಾನಿ ತ್ರೀಣಿ೤೤
ಅನುಕ್ತಂ ವಾತವ್ಯಾಧಿವ್ರಣಾದಿ ದೋಷಾದೀತ್ಯಾದಿನಾ ದುಷ್ಕರ್ಮಗ್ರಹಣಮ್‌೤೤

ತಾ:ಗುಹ್ಯಸ್ಥಾನದಕುರು, ಹೊಟ್ಟೆಯ ಎಡಭಾಗದ ಮಾಂಸಗ್ರಂಥಿಗೆ ಸಂಬಂಧಿಸಿದರೋಗ, ಮೂತ್ರವ್ಯಾಧಿ, ಅತಿಸಾರ, ಹೊಟ್ಟೆ ಉಬ್ಬರ, ಕೆಮ್ಮಲು, ಶ್ವಾಸಬಾಧೆ, ವಾತದ ಊರ್ಧ್ವಗಮನ ರೋಗ, ಗುದಗುಹ್ಯರೋಗಗಳು, ತಲೆನೋವು, ವಾಂತಿ, ಬಿಕ್ಕಳಿಕೆ, ಕತ್ತಿನಲ್ಲಿ ರಸಗ್ರಂಥಿಯು ಕಟ್ಟುವುದರಿಂದ ಆಗುವ ಉರಿತದ ಬೇನೆ, ಅಜೀರ್ತಿಬಾಧೆ, ವಾತಪಿತ್ತ ಕಫಗಳೆಂಬ ತ್ರಿದೋಷಗಳಿಂದ ಹುಟ್ಟಿದ ಜ್ವರ, ಒಂದು ದಿನದ ಶೀತ, ಉಷ್ಣರೋಗ, ಇದು ವರೆಗೂ ಹೇಳಿದ ಹಾಗೂ ಹೇಳಲ್ಪಡದ ದೋಷಗಳಿಂದ ಬರುವ ರೋಗಗಳೆಲ್ಲವೂ ಈ ಸಹಸ್ರನಾಮದ ಏಕವಾರ ಪಾರಾಯಣದಿಂದಲೇ ಶಮನಗೊಳ್ಳುತ್ತವೆ. ಈ ಸಹಸ್ರನಾಮವನ್ನು ಸ್ತ್ರೀಯರು, ಶೂದ್ರರು, ಪತಿತರು ಎಲ್ಲರೂ ಪಠಿಸಬಹುದು. ಪಠಿಸಬೇಕು. ಗುಲ್ಮಂ ಪ್ಲೀಹಾನಮಶ್ಲೀಲಂ ಎಂದು ಕೂಡಾ ಹೇಳುವವರಿದ್ದಾರೆ. ಅದು ಪಾಠಾಂತರ. ಹಾಗೆ ಹೇಳಿದ ಪಕ್ಷದಲ್ಲಿ ಅದು ಪ್ಲೀಹ ಎಂಬ ಪದಕ್ಕೆ ಅಥವಾ ಅತಿಸಾರಂ ಎಂಬ ಪದಕ್ಕೆ ವಿಶೇಷಣವಾಗುತ್ತದೆ. ವಾತಾದಿ ಗಳಿಂದ ಆರು ರೋಗಗಳು ಬರುತ್ತವೆ.

ಮಹಾಗಣಪತೇಃ ಸ್ತೋತ್ರಂ ಸಕಾಮಃ ಪ್ರಜಪನ್ನಿದಮ್‌೤
ಇಚ್ಛಯಾ ಸಕಲಾನ್ ಭೋಗಾನುಪಭುಜ್ಯೇಹ ಪಾರ್ಥಿವಾನ್‌೤೤
ಮನೋರಥಫಲೈರ್ದಿವ್ಯೈ ರ್ವ್ಯೋಮಯಾನೈರ್ಮನೋರಮೈಃ೤
ಚಂದ್ರೇಂದ್ರ ಭಾಸ್ಕರೋಪೇಂದ್ರ ಬ್ರಹ್ಮ ಶರ್ವಾದಿ ಸದ್ಮಸು೤೤
ಕಾಮರೂಪಃ ಕಾಮಗತಿಃ ಕಾಮತೋ ವಿಚರನ್ನಿಹ೤
ಭುಕ್ತ್ವಾ ಯಥೇಪ್ಸಿತಾನ್ ಭೋಗಾನಭೀಷ್ಟಾನ್ ಸಹ ಬಂಧುಭಿಃ೤೤
ಗಣೇಶಾನುಚರೋ ಭೂತ್ವಾ ಮಹಾಗಣಪತೇಃ ಪ್ರಿಯಃ೤
ನಂದೀಶ್ವರಾದಿಸಾನಂದೀ ನಂದಿತಃ ಸಕಲೈರ್ಗಣೈಃ೤೤
ಶಿವಾಭ್ಯಾಂ ಕೃಪಯಾ ಪುತ್ರನಿರ್ವಿಶೇಷಂ ಚ ಲಾಲಿತಃ೤೤
ಶಿವಭಕ್ತಃ ಪೂರ್ಣಕಾಮೋ ಗಣೇಶ್ವರವರಾತ್ಪುನಃ೤೤
ಜಾತಿಸ್ಮರೋ ಧರ್ಮಪರಃ ಸಾರ್ವಭೌಮೋ7ಭಿಜಾಯತೇ೤೤
ದ್ವಿತೀಯಮಾಹ ಸಾರ್ಧೈಃ ಪಂಚಭಿರ್ಮಹಾಗಣಪತೇರಿತ್ಯಾದಿಭಿಃ ವ್ಯೋಮಯಾನೈಃ ವಿಮಾನೈಃ೤
ನಂದೀಶ್ವರಾದಿಸಾನಂದೀ ನಂದಿಕೇಶ್ವರಾದಿಸಮಾನಾನಂದಶಾಲೀ, ಶಿವಾಭ್ಯಾಂ ಗೌರೀಹರಾಭ್ಯಾಂ ಪುತ್ರನಿರ್ವಿಶೇಷಂ ಪುತ್ರತುಲ್ಯಂ ಯಥಾ ತಥಾ೤ ಶಿವಭಕ್ತಃ ಈಶ್ವರಭಕ್ತಃ ಜೀವಃ ಶಿವಶ್ಚೇತಿ ಚಿದ್ವಿಭಾಗಾಂತರ್ಗತೋ7ತ್ರ ಶಿವೋ ವಿವಕ್ಷಿತಃ, ನ ತು ಕೈಲಾಸವಾಸಿತ್ವಾದಿ ಗುಣವಿಶೇಷವಿಶಿಷ್ಟೋ ಗಾಣಪತ ಇತಿ ಯಾವತ್ ಜಾತಿಸ್ಮರಃ ಪೂರ್ವಜನ್ಮ ಸ್ಮರಣವಾನ್‌೤೤

ತಾ: ಇನ್ನು ಆಮುಷ್ಮಿಕವನ್ನು ಕೇಳಿಕೊಳ್ಳುವವನನ್ನು ಕುರಿತು ಸಾರ್ಧ ಪಂಚ (5 1/2) ಶ್ಲೋಕಗಳಲ್ಲಿ ತಿಳಿಸುತ್ತಾರೆ. ಸಕಾಮವಾಗಿ ಈ ಸ್ತೋತ್ರವನ್ನು ಪಠಿಸಿದವನು ಸ್ವೇಚ್ಛೆಯಿಂದ ಇಹಲೋಕದ ಎಲ್ಲಾ ಭೋಗಗಳನ್ನೂ ಅನುಭವಿಸಿ ಮನೋರಥ ಫಲಸ್ವರೂಪಗಳಾದ ದಿವ್ಯವಿಮಾನಗಳಲ್ಲಿ ಸೂಕ್ಷ್ಮಶರೀರದಿಂದ ಸ್ವರ್ಗವನ್ನು ಸೇರಿ, ಚಂದ್ರ- ಇಂದ್ರ- ಭಾಸ್ಕರ- ವಿಷ್ಣು- ಬ್ರಹ್ಮ- ಶಿವಾದಿ ದೇವತೆಗಳ ಆವಾಸ ಸ್ಥಾನಗಳಲ್ಲಿ ಕಾಮರೂಪನಾಗಿ, ಕಾಮಸಂಚಾರಿಯಾಗಿ ಸುಖದಿಂದ ವಿಹರಿಸಿ, ಅಲ್ಲಿ ಬಂಧುಗಳ ಜೊತೆಯಲ್ಲಿ ಈಪ್ಸಿತ ಭೋಗಗಳನ್ನೆಲ್ಲಾ ಅನುಭವಿಸುತ್ತಾನೆ. ಎಲ್ಲಾ ಗಣಗಳೊಂದಿಗೆ ಆನಂದವನ್ನು ಅನುಭವಿಸುತ್ತಾನೆ. ಪಾರ್ವತೀ ಪರಮೇಶ್ವರರಿಂದ ಪುತ್ರಸಮಾನನಾಗಿ ಲಾಲಿಸಲ್ಪಡುತ್ತಾನೆ. ಗಣೇಶ್ವರನ ವರದಿಂದ ಶಿವಭಕ್ತನಾಗಿ, ಪೂರ್ಣಕಾಮನಾಗಿ, ಪೂರ್ವಜನ್ಮ ಸ್ಮರಣೆ ಉಳ್ಳವನಾಗಿ, ಧರ್ಮತತ್ಪರನಾಗಿ, ಸಾರ್ವಭೌಮನಾಗಿ ಮತ್ತೆ ಹುಟ್ಟುತ್ತಾನೆ. ಶಿವಭಕ್ತ ಎಂಬ ಪದದಲ್ಲಿನ ‘ಶಿವ’ ಪದದಿಂದ ಪರಮಾತ್ಮನು ವಿವಕ್ಷಿತನಾಗಿದ್ದಾನೆ. ಕೈಲಾಸವಾಸಿ ಮೊದಲಾದ ಗುಣವಿಶೇಷಗಳಿರುವ ಶಿವನಲ್ಲ.

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share