MP ಕವನ ಸಂಗ್ರಹ : ಒಡಹುಟ್ಟಿದವಳು – ಕವಿಯಿತ್ರಿ . ಆಶಾಲತ

228
Share

ದಿವಂಗತ ಎಂ. ಎಸ್. ಶಿವಲಿಂಗಯ್ಯನವರ ಹಿರಿಯ ಪುತ್ರಿ
ಎಂ. ಎಸ್. ಮಂಜುಳ ರವರು ಚನ್ನಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್ ನಲ್ಲಿ ಪಿ. ಯು. ಸಿ ಮುಗಿಸಿ ಕುವೆಂಪು ಪ್ರಥಮ
ದರ್ಜೆ ಕಾಲೇಜ್ ಚನ್ನಪಟ್ಟಣದಲ್ಲಿ ಪದವಿ ಮುಗಿಸಿ
1988ರಲ್ಲಿ ಮೈಸೂರ್ ವಿಶ್ವ ವಿದ್ಯಾನಿಲಯದಿಂದ ಭೂಗೋಳ ಶಾಸ್ತ್ರ ಸ್ನಾತಕೋತ್ತರ ಪದವಿ ಯಲ್ಲಿ ಚಿನ್ನದ ಪದಕ ಪಡೆದು 25ವರ್ಷಗಳ ಕಾಲ
ಭೂಗೋಳ ಶಾಸ್ತ್ರಉಪನ್ಯಾಸಕಿಯಾಗಿ,5ವರ್ಷ ಪಾಂಡವಪುರ ತಾಲ್ಲೂಕ್ ನ ಅರಳು ಕುಪ್ಪೆ ಪದವಿ ಪೂರ್ವ ಕಾಲೇಜ್ ನಲ್ಲಿ ಪ್ರಾಂಶುಪಾಲರಾಗಿ ನಿಷ್ಠೆ ಯಿಂದ ಸೇವೆಸಲ್ಲಿಸಿ
ಅಪಾರ ಶಿಷ್ಯ ಕೋಟಿಯ ಪ್ರೀತಿಯ ಗುರುವಾಗಿ ಈ ತಿಂಗಳು ಮಾರ್ಚ್ 31ರಂದು ನಿವೃತ್ತಿ ಹೊಂದುತ್ತಿರುವ ಸೋದರಿ ಎಂ. ಎಸ್. ಮಂಜುಳಾರವರಿಗೆ ನನ್ನಕವನದ ಮೂಲಕ ಶುಭ ಕೋರುತ್ತಿದ್ದೇನೆ.

ಒಡಹುಟ್ಟಿದವಳು

ಎಲ್ಲರಂತಲ್ಲ ಎನ್ನ ಒಡ ಹುಟ್ಟಿದವಳು
ಸುಕೋಮಲೆ, ಸಚ್ಚಾರಿತ್ರ್ಯ ವುಳ್ಳ ಮೃದು ಮನದ ಮಾನಿನಿ ಇವಳು
ತಾಯ್ತಂದೆಯರ ಅಕ್ಕರೆಯ ಕೂಸಾಗಿ ಮಂಜುನಾಥನ ವರಪ್ರಸಾದದಿ ಜನಿಸಿದವಳು
ಗುರುವೃoದಲ್ಲಿ ನೆಚ್ಚಿನ ಶಿಷ್ಯೆ ಯಾಗಿ
ಬಾಲ್ಯ ದಿಂದಲೇ ಆಟೋಟ, ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದವಳು
ಚಿನ್ನದ ಪದಕ ಗಳಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ ನನ್ನಕ್ಕ ||1||

“ಕ್ಷಮಯ ಧರಿತ್ರಿ” ಯಂತೆ ಎಲ್ಲರನ್ನು, ಎಲ್ಲವನ್ನು ಕ್ಷಮಿಸುವ ಹೃದಯವೈಶಾಲ್ಯವುಳ್ಳವಳು “ಬಂದದೆಲ್ಲ ಬರಲಿ, ಭಗವಂತನ ದಯೆಯಿರಲಿ ” ಎಂದು ದೈವದಲ್ಲಿ ನಂಬಿಕೆ ಇರಿಸಿ ಬಾಳ ಬಂಡಿಯ ನಡೆಸಿದವಳು
ಹುಟ್ಟಿದ ಮನೆಗೆ ಸೇರಿದ ಸದನಕ್ಕೆ
ಕೀರ್ತಿ ತಂದವಳು
ಗೆಳತನಕ್ಕೊಂದು ಹೊಸ ಅರ್ಥವನು
ನೀಡಿದವಳು
ಎಲ್ಲರಂತಲ್ಲ ಎನ್ನ ಒಡ ಹುಟ್ಟಿದವಳು ||2||

ಪ್ರೀತಿ, ಆತ್ಮೀಯತೆಯ ಅಕ್ಷಯ ಪಾತ್ರೆ ಇವಳು
ಕಲೆ, ಸಂಸ್ಕೃತಿ, ಆಚಾರ, ವಿಚಾರ ಗಳ ಪ್ರತಿನಿಧಿ ಇವಳು
ತಾಯಿಯಾಗಿ, ಮಡದಿcಯಾಗಿ, ಸೋದರಿಯಾಗಿ, ಗೆಳತಿಯಾಗಿ
ಇವಳ ಕಾರ್ಯ ವ್ಯಾಪ್ತಿ ವಿಶಾಲ, ವಿಸ್ತಾರ
ಉಪನ್ಯಾಸಕಿಯಾಗಿ, ಪ್ರಾಂಶುಪಾಲೆಯಾಗಿ ಇವಳ ಸೇವಾ
ಕೈಂಕರ್ಯ ಮಹತ್ತರ
ಅಸಂಖ್ಯಾತ ಶಿಷ್ಯ ಕೋಟಿಯ
ನಲ್ಮೆಯ ಗುರು ಇವಳು ||3||

ಸದಾ ಚಟುವಟಿಕೆಯಿಂದಿರುವ
ಉತ್ಸಾಹದ ಖನಿ ಇವಳು
ಮನದಲ್ಲಿ ಸಾವಿರ ದುಗುಡವಿದ್ದರು
ಮೊಗದಲ್ಲಿ ನಗುವಿನ ಚಿಲುಮೆ ಚಿಮ್ಮಿಸುವ ನಗೆಯ ಕಾರಂಜಿ ಇವಳು
ಎನ್ನ ದುಃಖ, ದುಮ್ಮಾನ ಗಳಿಗೆ, ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದ ಸ್ಪಂದನಾ ಮೂರ್ತಿ ಇವಳು
ಎಲ್ಲರಂತಲ್ಲ ಎನ್ನ ಒಡಹುಟ್ಟಿದವಳು ||4||

ಎನ್ನ ಕವಿತಾ ಶಕ್ತಿಗೆ ಸ್ಫೂರ್ತಿಯ ಸೆಲೆಯಾಗಿ
ಎನ್ನ ಸಾಹಿತ್ಯ ಚಟುವಟಿಕೆಗಳಿಗೆ
ಪ್ರೇರಣಾ ಶಕ್ತಿಯಾಗಿ ನಿಂತವಳು
ಸಹನೆ -ತಾಳ್ಮೆ, ಸರಳ -ಸಜ್ಜನಿಕೆಯ
ಮೇರು ಪರ್ವತ ಇವಳು
ಹೊಗಳಿಕೆಗೆ ಹಿಗ್ಗದ, ತೆಗೆಳಿಕೆಗೆ ಕುಗ್ಗದ ‘ಸ್ಥಿತ ಪ್ರಜ್ಞೆ ‘ ನನ್ನಕ್ಕ
ಓ ನನ್ನಕ್ಕರೆಯ ಪ್ರೀತಿಯ ಸೋದರಿಯೆ ನಿಮ್ಮನಿವೃತ್ತಿ ಜೀವನ ಶಾಂತಿ, ಸಮಾಧಾನಗಳಿಂದ ಕೂಡಿರಲಿ, ಭಗವಂತನ ಶ್ರೀರಕ್ಷೆ ಸದಾ ನಿಮ್ಮ ಮೇಲಿರಲೆಂದು ನನ್ನ ಕವನದ ಮೂಲಕ ಹಾರೈಸುವೆ ||5||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share