MP ಕವನ ಸಂಗ್ರಹ : ‘ರಾಮ ಮಂದಿರ’ – ಶ್ರೀಮತಿ. ಆಶಾಲತ

209
Share

“ರಾಮ ಮಂದಿರ “
ಜಯ ಜಯ ರಾಮ, ಜಾನಕಿ ರಾಮ
ಶತಮಾನಗಳಿಂದ ಕಂಡ ಕನಸು
ನನಸಾಗಿದೆ ಇಂದು
ಸಾತ್ವಿಕ ಮನಗಳ ದಿಗ್ವಿಜಯ
ತಾಮಸ ಜನರ ಅಪಜಯ
ನಿನ್ನೀ ಮಂದಿರದ ನಿರ್ಮಾಣವೂ
ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡ ಬೇಕಾದ ಸುದಿನವು
ಸಹಸ್ರಾರು ಜನರ ಪರಿಶ್ರಮದ ಫಲವು
ಪ್ರಧಾನಿಯವರ ಅವಿರತ ಪ್ರಯತ್ನದಿ ನಿರ್ಮಿತವಾಗಿದೆ ನಿನ್ನೀ ಮಂದಿರವು ||1||

ಜಯ ಜಯ ರಾಮ ಜಾನಕಿ ರಾಮ
ಪಿತೃ ವಾಕ್ಯ ಪರಿಪಾಲನೆಗಾಗಿ ನೀ ಅನುಭವಿಸಿದೆ ವನವಾಸವ ಅಂದು
ವಿಕೃತ ಮನದ ಅರಸರಿಂದ, ಅವರ
ದುಷ್ಟಕೃತ್ಯಗಳಿಂದ ಮಾತೃ ವಿಲ್ಲದ ತವರಿನಂತಾಗಿತ್ತು ನಿನ್ನಯ ತಾಣವು
ಸೋದರ ಪ್ರೀತಿಗೆ, ಪಿತೃ ವಾಕ್ಯ ಪರಿಪಾಲನೆಗೆ, ಸದ್ಗುಣವಂತ ಪತಿಗೆ
ನೀನೆ ಆದರ್ಶ
ಹನುಮನ ಪರಮ ಭಕ್ತಿಯು ಪಸರಿಸಿತು ನಿನ್ನಿಂದ ಇಡೀ ಜಗಕ್ಕೆ ||2||

ಜಯ ಜಯ ರಾಮ,ಜಾನಕಿ ರಾಮ
ನಿನ್ನ ಮಂದಿರವ ನಿರ್ಮಿಸಲು
ಹಗಲಿರುಳು ಶ್ರಮಿಸಿದ ಕಾಯಕ ಯೋಗಿಗಳಿಗೆ
ದೇಶದ ಪ್ರಧಾನಿಗಳಿಂದ
ಪುಷ್ಪಾರ್ಚನೆ
ಪ್ರೀತಿಯ ಉಡುಗೊರೆಗಳ ಆತ್ಮೀಯ ವಿತರಣೆ
ಇಡೀ ಜಗವೇ ನಿಬ್ಬೆರಗಾಗಿ
ನೋಡುವಂತಹ ಅಭೂತ ಪೂರ್ವ
ದೃಶ್ಯವಿದು
ಇತಿಹಾಸದಲ್ಲಿ ವಿಶ್ವ ದಾಖಲೆಯಾಗುವ ವಿಚಾರವಿದು ||3||

ಜಯ, ಜಯ ರಾಮ ಜಾನಕಿ ರಾಮ
ನಿನ್ನ ಮಂದಿರದ ಒಂದೊಂದು ಭಿತ್ತಿಯಲ್ಲೂ
ನನ್ನ ನಾಡಿನ ಬಾಂಧವರ ಬೆವರಿನ ಶ್ರಮವಿದೆ
ವರುಷಗಳುರುಳಿದರು, ಶತಮಾನ ಗಳು ಕಳೆದರೂ
ಎಂದಿಗೂ ಅಳಿಯದು ನಿನ್ನೀ ಮಂದಿರವು
ನಿನ್ನಾಗಮನದಿ ಸ್ವರ್ಗವಾಗಲಿ ಧರೆಯು
ರಾಮರಾಜ್ಯದ ಕನಸು ನನಸಾಗಲಿ
ಮತಾಂಧರಲ್ಲಿ ಅರಿವಿನ ಹಣತೆಯ ಬೆಳಗಿಸು ಪ್ರಭುವೇ ||4||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share