ಶ್ರೀ ಆಂಜನೇಯ ಚರಿತ್ರೆ ಭಾಗ 1 ಪುಟ 104

163
Share

ಶ್ರೀ ಆಂಜನೇಯ ಚರಿತ್ರೆ ಭಾಗ ಒಂದು ಪುಟ 104
ಓಂ ನಮೋ ಹನುಮತೆ ನಮಃ

ಶ್ರೀರಾಮನು ರಾಜ್ಯ ವ್ಯವಹಾರಗಳಲ್ಲಿ ಮಗ್ನನಾದ. ಒಂದು ದಿನ ವಿಶ್ರಾಂತಿಯಾಗಿ ಕುಳಿತುಕೊಂಡು ಅಮ್ಮಯ್ಯ ! ರಾಕ್ಷಸರ ಪೀಡೆ ಕಳೆಯಿತು. ಇನ್ನು ಪ್ರಜೆಗಳಲ್ಲಿ ಧರ್ಮ ಬುದ್ಧಿ ಉಂಟಾಗುವಂತೆ ಪ್ರಯತ್ನ ಪ್ರಾರಂಭಿಸಬಹುದು ಅಂದುಕೊಂಡ. ಅವನು ಹಾಗೆ ತೃಪ್ತಿ ಪಡುತ್ತಿರುವಾಗಲೇ ಆಕಾಶವಾಣಿ ಒಂದು ಹೀಗೆ ನುಡಿಯಿತು ! ಶ್ರೀರಾಮ ಇಷ್ಟಕ್ಕೆ ತೃಪ್ತಿ ಪಡುತ್ತಿರುವೆಯಾ ? ನೂರು ಯೋಜನದ ಸಮುದ್ರ, 10 ತಲೆಗಳ ರಾವಣ. ಅವನ ಸಂಹಾರ ಅದೇ ದೊಡ್ಡದು ಅಂದುಕೊಂಡಿದ್ದೀಯಾ ?
ಪಾತಾಳದಲ್ಲಿ ಒಬ್ಬ ರಾವಣ ಇದ್ದ. ಅವನನ್ನು ಹನುಮಂತನೇ ಸಂಹರಿಸಿದ. ಭೂಲೋಕದಲ್ಲಿ ಗುಬ್ಬಚ್ಚಿ ಅಂತ ಇನ್ನೊಬ್ಬ ರಾವಣ. ಅವನನ್ನು ನೀನೇ ಸಂಹರಿಸಿದೆ . ಆದರೆ ಆಕಾಶದಲ್ಲಿ ಇವರಿಬ್ಬರಿಗಿಂತ 100 ಪಟ್ಟು ಬಲವುಳ್ಳ ಶತಕಂಠ ರಾವಣ ಇದ್ದಾನೆ. ಭೂಮಿಗೂ ಸ್ವರ್ಗಕ್ಕೂ ಮದ್ಯೆ ಆಕಾಶದಲ್ಲಿ ಸಪ್ತ ಸಮುದ್ರಗಳು ಇವೆ. ಅವುಗಳಲ್ಲಿ ಸಾವಿರ ಯೋಜನರ ದೂರದಲ್ಲಿ ಶತಕಂಠ ಲಂಕಾದ್ವೀಪ ಇದೆ. ಅಲ್ಲಿ ಶತಕಂಠ ರಾವಣ ಇದ್ದಾನೆ. ಅವನು ಮಹಾ ಸೋಮಾರಿ, ಹಾಗಾಗಿ ತಾನಾಗಿ ಯಾರ ಮೇಲೂ ಯುದ್ಧಕ್ಕೆ ಬರುವುದಿಲ್ಲ. ಬಂದರೆ ಮಾತ್ರ ಅವನನ್ನು ದೇವತೆಗಳು ಎದುರಿಸಲಾರರು. ರಾಮಚಂದ್ರ ಅವನನ್ನು ಸಂಹರಿಸುವುದು ನಿನಗೂ ಕಷ್ಟದ ಕೆಲಸವೇ, ಆದರೆ ಅವನನ್ನು ಸಂಹರಿಸದ ಹೊರತು ನೀನು ನಿರ್ಭಯವಾಗಿರಲು ಆಗುವುದಿಲ್ಲ. ರಾವಣ ಸಂಹಾರವಾದಾಗಿನಿಂದ ಅವನು ನಿನ್ನ ವಿಷಯದಲ್ಲಿ ಉರಿದುಕೊಳ್ಳುತ್ತಿದ್ದಾನೆ. ಆದ್ದರಿಂದ ನೀನು ಅವನನ್ನು ಸಂಹರಿಸುವ ಯೋಚನೆ ಮಾಡಬೇಕು.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ :
ಭಾಲರಾ
ಬೆಂಗಳೂರು


Share